ಮುತ್ತಿನಂಥ ಮಾತು
*ಮುಂಜಾನೇ ಮಾತು *🌷
🍁*ಒತ್ತಡವಿಲ್ಲದ* ಉದ್ಯೋಗವಿಲ್ಲ ,
*ನಷ್ಟವಿಲ್ಲದ* ವ್ಯಾಪಾರವಿಲ್ಲ ,
*ಕಷ್ಟವಿಲ್ಲದ* ವ್ಯವಸಾಯವಿಲ್ಲ ,
*ನೋವಿಲ್ಲದ* ಸಂಸಾರವಿಲ್ಲ ,
*ಸಮಸ್ಯೆಗಳಿಲ್ಲದ* ಮನುಷ್ಯನಿಲ್ಲ ,
ಇವೆಲ್ಲವನ್ನೂ ಜಯಸುವುದೇನೇ....
*"ಜೀವನ"*.✍
🙏 ಶುಭೋದಯ 🙏
--------------------------
"ನೀನು ಮಾಡಿದ ತಪ್ಪಿಗೆ ಬಿರುನುಡಿಯಬೇಡ,
ತಪ್ಪುಮಾಡದೆ ಎದುರಾಳಿಗೆ ತಲೆ ತಗ್ಗಿಸಬೇಡ.....
"ಜ್ಞಾನಕ್ಕಾಗಿ ಯಾರನ್ನಾದರೂ ಬೇಡು,
ಅನ್ನಕ್ಕಾಗಿ ಒಬ್ಬರನ್ನೂ ಬೇಡ ಬೇಡ.....
"ಬೇರೆಯವರು ನಮ್ಮನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲದಿರಬಹುದು ಆದರೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಪ್ರೀತಿಸುವುದು, ದ್ವೇಷಿಸುವುದು ಪರರಿಗೆ ಬಿಟ್ಟಿದ್ದು -
*ಸ್ವಾಮಿ ವಿವೇಕಾನಂದ*
---------------------------------------------------------------------------------
*ಸಣ್ಣಕತೆ*
ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.
ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..
ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು..
ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!
ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.
ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.
ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು.
ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ
ಇಳಿದು ಹೋಗುತ್ತಿತ್ತು.
ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.
ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.
ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.
ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?
ನಾಯಿಯ ಮಾಲಿಕ ಹೇಳಿದನು..
ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..
ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು ಎಂದು ಬೈದನು.
#ಜೀವನದ_ಸತ್ಯವು_ಇಷ್ಟೇ
ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರು ಅಗಿ ಕಾಣುತ್ತೇವೆ.
ನಮ್ಮಿಂದ ಒಂದು ಚಿಕ್ಕ ತಪ್ಪು ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.
ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದು ಅಗಿದ್ದರೆ
ಅದೆ ದಾರಿಯಲ್ಲಿ ಮುಂದುವರಿಯುವುದು ಉತ್ತಮ.
ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.
-------------------------------------------------------------------
ಅದ್ಭುತವಾದ ಈ ಪ್ರೇರಣಾ ಸಾಲನ್ನು ಓದಿ*
*ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ! ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
* ಒಬ್ಬಳು ಮಾತೆ ತನ್ನ ಮಗುವನ್ನು ಹೊತ್ತು ಹೆತ್ತು ಬೆಳೆಸುವಲ್ಲಿ ತನ್ನ ದೇಹದ ಸೌಂದರ್ಯವನ್ನು ತ್ಯಜಿಸುತ್ತಾಳೆ. ಅದೇ ಮಗ ದೊಡ್ಡವನಾಗಿ ಒಬ್ಬಳು ಸುಂದರಿಗಾಗಿ ತನ್ನ ತಾಯಿಯನ್ನೇ ತ್ಯಜಿಸುತ್ತಾನೆ!
ನಿಧಾನವಾಗಿ ಅರ್ಥೈಸಿ ಓದಿ ಈ ಸಾಲುಗಳನ್ನು...
*ತರಗತಿಯಲ್ಲಿ ಶಿಕ್ಷಕರು ಕೇಳುತ್ತಾರೆ
ಹಳ್ಳಿಗಳಿಗೆ ಮತ್ತು ನಗರಗಳಿಗೆ ಇರುವ ವ್ಯತ್ಯಾಸಗಳೇನು..?
ಒಬ್ಬ ಬಾಲಕ ಬಹಳ ಮಾರ್ಮಿಕವಾಗಿ ಉತ್ತರಿಸುತ್ತಾನೆ.
ಕೇವಲ ಇಷ್ಟೇ ವ್ಯತ್ಯಾಸ...
ಹಳ್ಳಿಗಳಲ್ಲಿ ಗೋವುಗಳನ್ನು ಸಾಕಲಾಗುತ್ತದೆ ಮತ್ತು ನಾಯಿಗಳು ಅಲೆಯುತ್ತವೆ,
ನಗರಗಳಲ್ಲಿ ನಾಯಿಗಳನ್ನು ಸಾಕಲಾಗುತ್ತದೆ ಮತ್ತು ಗೋವುಗಳು ಅಲೆಯುತ್ತವೆ.
ಜೀವನದ ಕಟು ಸತ್ಯ...
ಅನಾಥಾಶ್ರಮದಲ್ಲಿ ಅತ್ಯಂತ ಬಡವರ ಮಕ್ಕಳು ಕಾಣ ಸಿಗುತ್ತಾರೆ ಮತ್ತು ವೃದ್ಧಶ್ರಾಮದಲ್ಲಿ ಅತ್ಯಂತ ಶ್ರೀಮಂತ ಮಕ್ಕಳ ಹೆತ್ತವರು ಕಾಣ ಸಿಗುತ್ತಾರೆ..
--------------------------------------------------------------------
ಮೌನವಾದೆ 🙏🙏
"ಒಳಗೆ ಫ್ಯಾನಿನಡಿಯಲಿ ಕೂತು
ಸೆಕೆಸೆಕೆಯೆಂದು ಗೊಣಗುತಲಿದ್ದೆ
ಹೊರಗೆ ಉರಿಬಿಸಿಲಿನಲಿ ಬೆನ್ನು
ಬಾಗಿಸಿ ದುಡಿಯುತ್ತಿದ್ದವನ ಕಂಡು
ಮೌನವಾದೆ! 🙏🙏🙏
ಈಜುಕೊಳದಲಿ ಈಜಾಡಲು
ನೀರಿಲ್ಲವೆಂದು ಕೊರಗುತಲಿದ್ದೆ
ತೊಟ್ಟು ನೀರಿಗಾಗಿ ಮೈಲುದೂರ
ನಡೆದುಹೋಗುತ್ತಿದ್ದವನ ಕಂಡು
ಮೌನವಾದೆ! 🙏🙏🙏
ಹೊಟ್ಟೆತುಂಬಿಸಲು ರುಚಿಯಾದ
ಊಟ ಸಿಗಲಿಲ್ಲವೆಂದು ಸಿಟ್ಟಾಗುತಲಿದ್ದೆ
ತುತ್ತು ಅನ್ನಸಿಗದೆ ಹಸಿವಿನಿಂದ
ಸಾಯುತಲಿದ್ದವನ ಕಂಡು
ಮೌನವಾದೆ!🙏🙏
ಸಾವಿರ ರೂಪಾಯಿ ಇಟ್ಟುಕೊಂಡು
ಲಕ್ಷಲಕ್ಷಬೇಕೆಂದು ಹಂಬಲಿಸುತಲಿದ್ದೆ
ಒಂದು ರೂಪಾಯಿ ಹಣಕಾಗಿ
ಭಿಕ್ಷೆ ಬೇಡುತ್ತಿದ್ದವನ ಕಂಡು
ಮೌನವಾದೆ! 🙏🙏🙏
ಹೆತ್ತವರು ಬಂಧುಬಳಗದವರು
ಮಾತಾಡಿಸಿಲ್ಲವೆಂದು ಮಂಕಾಗುತಲಿದ್ದೆ
ಹೇಳುವವರು ಕೇಳುವವರು ಯಾರೂ
ಇಲ್ಲದೆ ಅನಾಥನಾಗಿದ್ದವನ ಕಂಡು
ಮೌನವಾದೆ! 🙏🙏🙏
ಬಣ್ಣವಿಲ್ಲ ಎತ್ತರವಿಲ್ಲ ಅಂದವಿಲ್ಲ
ಚಂದವಿಲ್ಲವೆಂದು ಚಿಂತೆಮಾಡುತಿದ್ದೆ
ಕೈಯಿಲ್ಲದೆ ಕಾಲಿಲ್ಲದೆ ಕಣ್ಣಿಲ್ಲದೆ
ಅಂಗಊನವಾಗಿದ್ದವನ ಕಂಡು
ಮೌನವಾದೆ! 🙏🙏🙏
ಹೌದು..!
ಇರುವ ಭಾಗ್ಯವ ನೆನೆದು
ನಾ ಮೌನವಾದೆ...!
💐🙏🙏🙏🙏💐
------------------------------------------------------------------------
ಜೀವನದ ಗಣಿತ 🌏
"ಗುಣದಿಂದ ಗುಣಿಸಿದರೆ ಗುಣವಂತ"
"ಭಾವನೆಗಳಿಂದ ಭಾಗಿಸಿದರೆ ಭಾಗ್ಯವಂತ"
"ಹಣದಿಂದ ಕೂಡಿಸಿದರೆ ಸಿರಿವಂತ"
"ಇದ್ದದ್ದನ್ನು ಕಳೆದರೆ ಸಾಲವಂತ"
"ಇವರೆಲ್ಲರನ್ನೂ ಗುಣಿಸಿ ಭಾಗಿಸಿ ಕೂಡಿಸಿ ಕಳೆಯುವವನು"
🙏....."
ಭಗವಂತ".....🙏
---------------------------------------------------------------------------
ನವದಂಪತಿಗಳು ಒಂದು ಬಾಡಿಗೆ ಮನೆಯಲ್ಲಿ ವಾಸವಾರಂಭಿಸಿದರು.
ಮರುದಿನ ಬೆಳಗ್ಗೆ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಒಣಗಿಸಲು ಹಾಕುತ್ತಿರುವುದನ್ನು ಈಕೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳ ಕೊಳೆ ಸರಿಯಾಗಿ ಹೋಗಿಲ್ಲ ಅಂತ ಆಕೆಗೆ ಅನಿಸಿತು.
'' ನೀಟಾಗಿ ಬಟ್ಟೆ ಒಗೆಯಲು ಆಕೆಗೆ ಗೊತ್ತಿಲ್ಲದಿರಬಹುದು. ಅಥವಾ ಆಕೆಯ ಹತ್ತಿರ ಒಳ್ಳೆಯ ಸಾಬೂನು ಇರದಿರಬಹುದು " ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲಾ ಕಿಟಕಿಯಿಂದ ನೋಡುತ್ತಾ ವ್ಯಂಗ್ಯವಾಗಿ ತನ್ನ ಪತಿಯತ್ರ ಹೇಳುತ್ತಿದ್ದಳು.
ಪತ್ನಿಯ ಮಾತಿಗೆ ಆತ ಏನೂ ಪ್ರತಿಕ್ರಿಯಿಸುತ್ತಿರಲಿಲ್ಲ.
ಸುಮಾರು ಒಂದು ತಿಂಗಳ ನಂತರ ಒಂದು ದಿನ ಬೆಳಗ್ಗೆ ಕಿಟಕಿಯಿಂದ ಹೊರಗೆ ನೋಡಿದಾಗ ಒಣಗಿಸಲು ಹಾಕಿದ ಬಟ್ಟೆಗಳು ಶುಭ್ರವಾಗಿರುವ ಬಟ್ಟೆಗಳನ್ನು ನೋಡಿ ಆಶ್ಚರ್ಯದಿಂದ ಪತಿಯತ್ರ ಹೇಳುತ್ತಾಳೆ " ರೀ.. ನೋಡಿ ಆಕೆ ಇವತ್ತು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತಿದ್ದಾಳೆ ನನಗೆ ಆಶ್ಚರ್ಯವಾಗುತ್ತಿದೆ. ನಿನ್ನೆ ಯಾರೋ ಆಕೆಗೆ ನೀಟಾಗಿ ಬಟ್ಟೆ ಒಗೆಯಲು ಕಲಿಸಿರಬೇಕು ." ಅಂತ ಪುನಃ ಅಪಹಾಸ್ಯ ಮಾಡುತ್ತಾ ಹೇಳಿದಳು.
ಆತ ಹೇಳುತ್ತಾನೆ " ಇವತ್ತು ನೀನು ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮ ಮನೆಯ ಕಿಟಕಿಯ ಗಾಜುಗಳನ್ನು ಕ್ಲೀನ್ ಮಾಡಿದ್ದೆ "
ಆಕೆಗೆ ತನ್ನ ತಪ್ಪಿನ ಅರಿವಾಯಿತು. ಆಕೆಗೆ ಬೇರೇನೂ ಹೇಳೋದಕ್ಕೆ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ಈಕೆ ಕಾಣಲು ಕಾರಣ ಈಕೆಯ ಮನೆಯ ದೂಳುಗಳಿಂದ ಕೂಡಿದ ಕಿಟಕಿಯ ಗಾಜುಗಳೇ ಆಗಿದ್ದವು.
ನಾವು ಇತರರನ್ನು ನೋಡುವಾಗ ನಮ್ಮ ಮನಸಿನ ಕಿಟಕಿಗಳ ಗಾಜುಗಳು ಶುಭ್ರವಾಗಿರಲಿ. ನಮ್ಮೊಳಗಿನ ಕಿಟಕಿಯ ಗಾಜುಗಳು ದೂಳುಗಳಿಂದ ಕೂಡಿದ್ದರೆ , ನಮ್ಮ ಎದುರಿಗಿರುವವರು ಎಷ್ಟೇ ಒಳ್ಳೆಯವರಾಗಿದ್ದರೂ ನಮಗೆ ಕೆಟ್ಟವರಂತೆ ಕಾಣಿಸುತ್ತಾರೆ.....
------------------------------------------------------------------------------------------------------
*ವೃದ್ದಾಶ್ರಮದಲ್ಲಿ ತಂದೆ ತಾಯಿಯರನ್ನು ನೋಡಿ ಎಲ್ಲರೂ ಮಗನನ್ನೇ ಹಳಿಯುತ್ತಾರೆ*
ಆದರೆ ಸಮಾಜ ಮರೆತು ಹೋಗುತ್ತೆ ಅವರನ್ನು ಆಶ್ರಮಕ್ಕೆ ಅಟ್ಟುವುದರಲ್ಲಿ ಒಬ್ಬ ಮಗಳ ಕೈವಾಡವಿದೆಯೆಂದು..!!
ಇಲ್ಲಾಂದ್ರೆ ಮದುವೆಗೆ ಮುಂಚೆ ಯಾಕೆ ಪುತ್ರ ಪೋಷಕರನ್ನು ಆಶ್ರಮಕ್ಕೆ ಕಳಿಸುವುದಿಲ್ಲಾ..!!
ಸಂಸ್ಕಾರ ಮಗಳಿಗೂ ಕಲಿಸಿ..!!
*ಕಹಿಯಾದರೂ ಸತ್ಯ*
-------------------------------------------------------------------------------------------------------
ಅಪ್ಪ ಅಮ್ಮನ ಕುರಿತ ಅದ್ಭುತ ಹಿತ ನುಡಿ
*ಅಪ್ಪ* *ಅಮ್ಮ*
*ಒಂದು ಸುಂದರ ವಿಶ್ವ*
*ಅಮ್ಮ*.. ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುತ್ತಾಳೆ
*ಅಪ್ಪ*..ಪ್ರಪಂಚವನ್ನು ನಿನಗೆ ಪರಿಚಯಿಸುತ್ತಾನೆ.
ಜೀವ.. *ಅಮ್ಮ*ನದು.
ಜೀವನ.. *ಅಪ್ಪ*ನದು.
ಹಸಿವೆ ತಿಳಿಯದಂತೆ *ಅಮ್ಮ* ನೋಡುತ್ತಾಳೆ.
ಹಸಿವಿನ ಬೆಲೆಯನ್ನು *ಅಪ್ಪ* ತಿಳಿಸುತ್ತಾನೆ.
*ಅಮ್ಮ* ಭದ್ರತೆಯಾದರೆ..
*ಅಪ್ಪ* ಬಾಧ್ಯತೆಯಾಗುತ್ತಾನೆ..
ಬೀಳದಂತೆ ಹಿಡಿಯಬೇಕೆಂದು *ಅಮ್ಮ* ನೋಡುತ್ತಾಳೆ..
ಬಿದ್ದರೂ ಮೇಲೆ ಏಳಬೇಕೆಂದು *ಅಪ್ಪ* ಹೇಳುತ್ತಾನೆ..
ನಡೆಸುವದು *ಅಮ್ಮ*ನಾದರೆ..
ನಡವಳಿಕೆ *ಅಪ್ಪ*ನಿಂದ..
ತನ್ನ ಅನುಭವಗಳನ್ನು ವಿದ್ಯೆಯಂತೆ ಬೋಧಿಸುತ್ತಾಳೆ *ಅಮ್ಮ*..
ನಿನ್ನ ಅನುಭವವೇ ವಿದ್ಯೆ ಎಂದು ತಿಳಿಸುವಂತೆ ಮಾಡುತ್ತಾನೆ *ಅಪ್ಪ*..
*ಅಮ್ಮ* ಆಲೋಚನೆಯಾದರೆ..
*ಅಪ್ಪ* ಆಚರಣೆ..
*ಅಮ್ಮ*ನ ಪ್ರೇಮವನ್ನು ನೀನು ಹಸುಳೆ ಇರುವಾಗಲೇ ತಿಳಿದು ಕೊಳ್ಳುತ್ತೀಯಾ..
ಅದರೆ...
*ಅಪ್ಪ*ನ ಪ್ರೇಮವನ್ನು ತಿಳಿದು ಕೊಳ್ಳುವುದು ನೀನೊಬ್ಬ ಹಸುಳೆಯ ತಂದೆ ಆದಾಗಲೇ..☺☺
love your parents🙏
ಆದಷ್ಟು ನಿಮ್ಮ ತಂದೆ-ತಾಯಿಯನ್ನು ಗೌರವಿಸಿ
------------------------------------------
ಪ್ರೀತಿಗೆ ಮುಪ್ಪಿನ ಭಯವಿಲ್ಲ !
ದಾಂಪತ್ಯದ ಅನುಸಂಧಾನ ಹೇಗಿದೆ ನೋಡಿ !
***********************************
ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !
ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ ಹೇಳುತ್ತಾಳೆ :
" ಈ ದಾಂಪತ್ಯಯಾನದಲಿ
ಎನ್ನ ಕೈ ಪಿಡಿದವರು
ಹಿಡಿದ ಕೈ ಬಿಡದವರು
ನೀವಲ್ಲವೇ ನನ್ನ ದೊರೆ ನೀವಲ್ಲವೇ !
ಹಬ್ಬಗಳು ಬಂದಾಗ
ಹೊಸಪಂಚೆ ನಿಮಗಿರಲಿ, ಇರದಿರಲಿ
ನಾ ಹಳೆ ಸೀರೆ ಉಟ್ಟಾಗ
ಬಿಟ್ಟುಬಿಡು ಎಂದವರು
ಸಾಕುಬಿಡು ಎಂದವರು
ಹೊಸಸೀರೆ ಕೊಟ್ಟವರು,
ಮಲ್ಲಿಗೆಯನಿತ್ತವರು,
ನೀವಲ್ಲವೇ ನನ್ನ ದೊರೆ ನೀವಲ್ಲವೇ ?
ಮತ್ತೆ ನಾ ತವರೂರು ಹೊರಟಾಗ
ಬಾಗಿಲಬಳಿ ಬಂದವರು
ಬೇಗ ಬಾ ಎಂದವರು
ನೀವಲ್ಲವೇ ನನ್ನ ದೊರೆ ನೀವಲ್ಲವೇ
ಮತ್ತೆ ಫೋನುಗಳ ಮಾಡುತ್ತ ,
ಮನೆಯೊಳಗೆ ನೀನಿಲ್ಲ
ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ
ಬೇಗನೆ ಬರುವೆಯಲ್ಲ ಎಂದವರು
ನೀವಲ್ಲವೇ, ನನ್ನ ದೊರೆ ನೀವಲ್ಲವೇ ? "
ಅದಕ್ಕೆ ಗಂಡ ಹೇಳ್ತಾನೆ !
" ಬೇರಿಲ್ಲದೆ ಮರವೆಲ್ಲಿದೆ
ಮರವಿಲ್ಲದೆ ಹೂವೆಲ್ಲಿದೆ
ಹೂವಿಲ್ಲದೆ ಹಣ್ಣೆಲ್ಲಿದೆ
ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?
ಎಂತಹ ಹೃದಯಸ್ಪರ್ಶಿ ಮಾತು !....
" ಮನೆಯೊಳಗೆ ಬಂದವಳೇ ,
ಮನೆಯಾಕೆ ಆದವಳೇ,
ಮನದೊಳಗೆ ನಿಂದವಳೇ,
ನೀನಲ್ಲವೇ ನನ್ನರಸಿ ನೀನಲ್ಲವೇ ?
ಬಡತನವೊ ,ಸಿರಿತನವೊ ,
ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !
ಜೊತೆಯಾಗಿ ನಿಂದವಳು
ನೀನಲ್ಲವೇ ನನ್ನರಸಿ ನೀನಲ್ಲವೇ ! "
ಮತ್ತೆ ಕೊನೆಗೆ ಆ ಮುದುಕ ಒಂದು ಮಾತು ಹೇಳುತ್ತಾನೆ !
" ವೃದ್ಧಾಪ್ಯ ಬಂದಾಗ
ಆರೋಗ್ಯ ಹೋದಾಗ ,
ಆದಾಯ ಇರದಾಗ ,
ಹಣವೆಲ್ಲ ಸವೆದಾಗ ,
ಬಂಧುಗಳು ಬರದಾಗ ,
ಮಕ್ಕಳು ಮರೆತಾಗ ,
ನಾ ಒಳಗೊಳಗೆ ಅತ್ತಾಗ ,
ಬಳಿ ಬಂದು ನಿಂದವಳು ,
ಮರುಗದಿರಿ ಅಂದವಳು ,
ಕಣ್ಣೀರ ತಡೆದವಳು ,
ಯಾರಿರಲಿ, ಇರದಿರಲಿ ,
ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,
ನೀನಲ್ಲವೇ ನನ್ನರಸಿ ನೀನಲ್ಲವೇ !
*****************************
ಇದು ನಮ್ಮ ಭಾರತೀಯ ಸಂಸ್ಕೃತಿ !
---------------------------------------------------------------------
🌷ಮನವಾಣಿ🌷
*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*
*🌺ಶುಭ ಮುಂಜಾನೆ🌺*
-------------------------------------------------------------------------
------------------------------------------
ಪ್ರೀತಿಗೆ ಮುಪ್ಪಿನ ಭಯವಿಲ್ಲ !
ದಾಂಪತ್ಯದ ಅನುಸಂಧಾನ ಹೇಗಿದೆ ನೋಡಿ !
***********************************
ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !
ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ ಹೇಳುತ್ತಾಳೆ :
" ಈ ದಾಂಪತ್ಯಯಾನದಲಿ
ಎನ್ನ ಕೈ ಪಿಡಿದವರು
ಹಿಡಿದ ಕೈ ಬಿಡದವರು
ನೀವಲ್ಲವೇ ನನ್ನ ದೊರೆ ನೀವಲ್ಲವೇ !
ಹಬ್ಬಗಳು ಬಂದಾಗ
ಹೊಸಪಂಚೆ ನಿಮಗಿರಲಿ, ಇರದಿರಲಿ
ನಾ ಹಳೆ ಸೀರೆ ಉಟ್ಟಾಗ
ಬಿಟ್ಟುಬಿಡು ಎಂದವರು
ಸಾಕುಬಿಡು ಎಂದವರು
ಹೊಸಸೀರೆ ಕೊಟ್ಟವರು,
ಮಲ್ಲಿಗೆಯನಿತ್ತವರು,
ನೀವಲ್ಲವೇ ನನ್ನ ದೊರೆ ನೀವಲ್ಲವೇ ?
ಮತ್ತೆ ನಾ ತವರೂರು ಹೊರಟಾಗ
ಬಾಗಿಲಬಳಿ ಬಂದವರು
ಬೇಗ ಬಾ ಎಂದವರು
ನೀವಲ್ಲವೇ ನನ್ನ ದೊರೆ ನೀವಲ್ಲವೇ
ಮತ್ತೆ ಫೋನುಗಳ ಮಾಡುತ್ತ ,
ಮನೆಯೊಳಗೆ ನೀನಿಲ್ಲ
ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ
ಬೇಗನೆ ಬರುವೆಯಲ್ಲ ಎಂದವರು
ನೀವಲ್ಲವೇ, ನನ್ನ ದೊರೆ ನೀವಲ್ಲವೇ ? "
ಅದಕ್ಕೆ ಗಂಡ ಹೇಳ್ತಾನೆ !
" ಬೇರಿಲ್ಲದೆ ಮರವೆಲ್ಲಿದೆ
ಮರವಿಲ್ಲದೆ ಹೂವೆಲ್ಲಿದೆ
ಹೂವಿಲ್ಲದೆ ಹಣ್ಣೆಲ್ಲಿದೆ
ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?
ಎಂತಹ ಹೃದಯಸ್ಪರ್ಶಿ ಮಾತು !....
" ಮನೆಯೊಳಗೆ ಬಂದವಳೇ ,
ಮನೆಯಾಕೆ ಆದವಳೇ,
ಮನದೊಳಗೆ ನಿಂದವಳೇ,
ನೀನಲ್ಲವೇ ನನ್ನರಸಿ ನೀನಲ್ಲವೇ ?
ಬಡತನವೊ ,ಸಿರಿತನವೊ ,
ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !
ಜೊತೆಯಾಗಿ ನಿಂದವಳು
ನೀನಲ್ಲವೇ ನನ್ನರಸಿ ನೀನಲ್ಲವೇ ! "
ಮತ್ತೆ ಕೊನೆಗೆ ಆ ಮುದುಕ ಒಂದು ಮಾತು ಹೇಳುತ್ತಾನೆ !
" ವೃದ್ಧಾಪ್ಯ ಬಂದಾಗ
ಆರೋಗ್ಯ ಹೋದಾಗ ,
ಆದಾಯ ಇರದಾಗ ,
ಹಣವೆಲ್ಲ ಸವೆದಾಗ ,
ಬಂಧುಗಳು ಬರದಾಗ ,
ಮಕ್ಕಳು ಮರೆತಾಗ ,
ನಾ ಒಳಗೊಳಗೆ ಅತ್ತಾಗ ,
ಬಳಿ ಬಂದು ನಿಂದವಳು ,
ಮರುಗದಿರಿ ಅಂದವಳು ,
ಕಣ್ಣೀರ ತಡೆದವಳು ,
ಯಾರಿರಲಿ, ಇರದಿರಲಿ ,
ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,
ನೀನಲ್ಲವೇ ನನ್ನರಸಿ ನೀನಲ್ಲವೇ !
*****************************
ಇದು ನಮ್ಮ ಭಾರತೀಯ ಸಂಸ್ಕೃತಿ !
---------------------------------------------------------------------
🌷ಮನವಾಣಿ🌷
*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*
*🌺ಶುಭ ಮುಂಜಾನೆ🌺*
-------------------------------------------------------------------------
Comments
Post a Comment